ಬೈರೂತ್: ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ. ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಿನ್ನೆ ಶಂಕಿತ ವಿಷಾನಿಲ ದಾಳಿ ನಡೆಸಲಾಗಿತ್ತು. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 58 ನಾಗರೀಕರು ಬಲಿಯಾಗಿದ್ದರು. ಇದೀಗ ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದ್ಲಿಬ್ ಪ್ರಾಂತ್ಯದ ಖಾನ್ ಶೈಖೌನ್ ಪ್ರಾಂತ್ಯದಲ್ಲಿ ವಿಷಾನಿಲ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆಂದು ಸಿರಿಯಾದ ಮಾನವ ಹಕ್ಕು ಮೇಲ್ವಿಚಾರಣೆ ಸಂಸ್ಥೆ ಮಾಹಿತಿ […]
↧