ಬೀಜಿಂಗ್: ನಮ್ಮಲ್ಲಿ ಈಗ ಮದುವೆಯಾಗಬೇಕಾದರೆ ಹುಡುಗಿ ಸಿಗೋದು ಕಷ್ಟ ಎನ್ನುವ ಮಾತು ಕೇಳಿದ್ದೇವೆ. ಆದರೆ ಈ ಸಮಸ್ಯೆ ಚೀನಾ ದೇಶದಲ್ಲೂ ಇದೆಯಂತೆ. ಅದಕ್ಕೆ ಇಲ್ಲಿನ ಒಬ್ಬ ಟೆಕಿ ವರ ಏನು ಮಾಡಿದ ಗೊತ್ತೇ?! ಹುಡುಗಿ ಸಿಗದ ನಿರಾಶೆಯಲ್ಲಿ ರೋಬೋಟ್ ನ್ನು ಮದುವೆಯಾಗಿದ್ದಾನೆ. ಅದೂ ತಾನೇ ಅಭಿವೃದ್ಧಿ ಪಡಿಸಿದ ರೋಬೋ! ಚೀನಾದ ಶೆಜಿಯಾಂಗ್ ಪ್ರಾಂತ್ಯದ ಇಂಜಿನಿಯರ್ ಶೆಂಗ್ ಎಂಬಾತ ಈ ವಿಶೇಷ ವರ! ಹುಡುಗಿ ಹುಡುಕಿ ಬೇಸತ್ತು, ಖಿನ್ನತೆಗೊಳಗಾಗಿದ್ದ ಶೆಂಗ್ ಕೊನೆಗೆ ತಾವೇ ಒಂದು ಹೆಣ್ಣು ರೋಬೋನನ್ನು ಅಭಿವೃದ್ಧಿಪಡಿಸಿದ್ದರು. […]
↧