ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಚೀನಾ ಎರಡನೇ ಬಾರಿ ನೆರವು ನೀಡಿದೆ. 2016 ರಲ್ಲಿ 900 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿದ್ದ ಚೀನಾ ಈ 2017 ರಲ್ಲಿ 300 ಮಿಲಿಯನ್ ಡಾಲರ್ ನೆರವು ನೀಡಿದೆ. ಚೀನಾದ ಆರ್ಥಿಕ ನೆರವು ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ಸಂಗ್ರಹ ಕುಸಿತ ಕಂಡಿರುವುದನ್ನು ಹಾಗೂ ಆಮದು ಏರಿಕೆಯಾಗುತ್ತಿರುವ ನಡುವೆ ರಫ್ತು ಇಳಿಕೆಯಾಗುತ್ತಿರುವುದಕ್ಕೆ ಸ್ಪಷ್ಟ ಚಿತ್ರಣವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಈ ನಡುವೆಯೇ ಪಾಕಿಸ್ತಾನ ಹಾಗೂ ಅಮೆರಿಕಾದ ದ್ವಿಪಕ್ಷೀಯ ಬಾಂಧವ್ಯ ಕುಸಿಯುತ್ತಿದ್ದು, […]
↧