ವಾಷಿಂಗ್ ಟನ್: ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಹೆಚ್ಚು ಲಘು ಪಾನೀಯ ಸೇವಿಸುವುದರಿಂದ ಮಕ್ಕಳಲ್ಲಿ ಸ್ಥೂಲಕಾಯ ಉಂಟಾಗುವ ಸಾಧ್ಯತೆ ಅಥವಾ ಮಧುಮೇಹ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಶರೀರಶಾಸ್ತ್ರಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಕುರಿತ ಸಂಶೋಧನೆ ವರದಿ ಪ್ರಕಟವಾಗಿದ್ದು, ಹಾಲುಣಿಸುವ ತಾಯಂದಿರು, ಗರ್ಭಿಣಿಯರು ಸಕ್ಕರೆ ಅಂಶ ಹೆಚ್ಚು ಹೊಂದಿರುವ ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡುವುದರಿಂದ ಅಥವಾ ಇನ್ನಿತರ ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ ಅಥವಾ ಸ್ಥೂಲ ಕಾಯ ಹೆಚ್ಚಾಗುವ ಸಾಧ್ಯತೆ […]
↧