ಕರಾಚಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿದ್ದ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಧರ್ಮನಿಂದನೆ ಹಾಗೂ ಭಯೋತ್ಪಾದನೆ ಕೇಸುಗಳನ್ನು ದಾಖಲಿಸಲಾಗಿದೆ. ನಿನ್ನೆ ರಾತ್ರಿ ತಟ್ಟಾ ಜಿಲ್ಲೆಯ ಘಾರೋ ಪಟ್ಟಣದಲ್ಲಿದ್ದ ದೇವಾಲಯವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ದೇವಾಲಯದಲ್ಲಿದ್ದ ದೇವರ ವಿಗ್ರಹಗಳು ಪಕ್ಕದಲ್ಲಿದ್ದ ಒಳಚರಂಡಿಯಲ್ಲಿ ಸಿಕ್ಕಿವೆ ಎಂದು ‘ಡಾನ್ ‘ ಪತ್ರಿಕೆ ವರದಿ ಮಾಡಿದೆ. ಧರ್ಮನಿಂದನೆ ಹಾಗೂ ಭಯೋತ್ಪಾದನೆ ಹೆಸರಲ್ಲಿ ಕೇಸು ದಾಖಲಿಸಲಾಗಿದೆ. ದೇವರ ವಿಗ್ರಹಗಳನ್ನು ನಾಶ ಗೊಳಿಸಿದ ಆರೋಪದ ಮೇಲೆ ಪೊಲೀಸರು ಎಫ್ ಐಆಆರ್ […]
↧