ಕರಾಚಿ: ಇಷ್ಟು ದಿನಗಳಿಂದ ಭಾರತಕ್ಕೆ ತಲೆನೋವಾಗಿದ್ದ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂಗೆ ತೀವ್ರ ಹೃದಯಾಘಾತವಾಗಿದೆ ಮತ್ತು ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಖಾಸಗಿ ಚಾನೆಲ್ ಒಂದು ವರದಿ ಮಾಡಿದೆ. ಶುಕ್ರವಾರ ತೀವ್ರ ಹೃದಯಾಘಾತಕ್ಕೊಳಗಾದ ದಾವೂದ್ ನನ್ನು ಕರಾಚಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಕೆಲವು ಮೂಲಗಳು ಸುದ್ದಿ ವಾಹಿನಿಗೆ ಹೇಳಿತ್ತು. ಆದರೆ ದಾವೂದ್ ನ ಸಮೀಪವರ್ತಿ ಛೋಟಾ ಶಕೀಲ್ ಇದನ್ನು ತಳ್ಳಿ ಹಾಕಿದ್ದಾನೆ. ದಾವೂದ್ ಸಂಪೂರ್ಣ ಆರೋಗ್ಯವಾಗಿದ್ದು, ಹೃದಯಾಘಾತವಾಗಿಲ್ಲ ಎಂದು ಶಕೀಲ್ ಸ್ಪಷ್ಟಪಡಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. […]
↧