ಸೆಂಟ್‌ಲೂಯಿಸ್(ಮೇ.05): ವಿಶ್ವದಾದ್ಯಂತ ನವಜಾತ ಮಕ್ಕಳಿಗೆ ಬಹುವಾಗಿ ಬಳಸುವ ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಕಂಪನಿಗೆ ಅಮೆರಿಕದ ನ್ಯಾಯಾಲಯವೊಂದು ಭರ್ಜರಿ 710 ಕೋಟಿ ರು. ದಂಡ ವಿಧಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಬಳಕೆ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಆಪಾದಿಸಿ ವರ್ಜೀನಿಯಾ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಂಟ್‌ಲೂಯಿಸ್‌ನ ನ್ಯಾಯಾಲಯ, ಮಹಿಳೆಗೆ 710 ಕೋಟಿ ರು. ಹಣವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ಆದೇಶಿಸಿದೆ. 2012ರಲ್ಲಿ ಲೂಯಿಸ್ ಸ್ಲೆಂಪ್ (62) ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದಳು. […]
↧