ಲಂಡನ್: ಅತೀವ ಬುದ್ದಿಶಾಲಿಗಳೆನಿಸಿಕೊಂಡಿರುವ ಆಲ್ಬರ್ಟ್ ಐನ್ ಸ್ಟೀನ್ ಮತ್ತು ಸ್ಟಿಫನ್ ಹಾಕಿಂಗ್ ಅವರಿಗಿಂತಲೂ ಎರಡು ಅಂಕಗಳನ್ನು ಬ್ರಿಟನ್ ನ ಮೆನ್ಸಾ ಐಕ್ಯು ಪರೀಕ್ಷೆಯಲ್ಲಿ(ಬುದ್ದಿಮತ್ತೆ ಸೂಚ್ಯಂಕ) ಪಡೆದಿರುವ ಭಾರತೀಯ ಮೂಲದ ಇಂಗ್ಲೆಂಡಿನ 12 ವರ್ಷದ ಬಾಲಕಿಗೆ ಆಸ್ಕರ್ ಸೊಸೈಟಿಯ ಸದಸ್ಯೆಯಾಗಿ ಸೇರಲು ಆಹ್ವಾನ ನೀಡಲಾಗಿದೆ. ರಾಜ್ ಗೌರಿ ಪವಾರ್ ಮ್ಯಾಂಚೆಸ್ಟರ್ ನಲ್ಲಿ ಕಳೆದ ತಿಂಗಳು ಬ್ರಿಟನ್ ನ ಮೆನ್ಸಾ ಐಕ್ಯು ಪರೀಕ್ಷೆ ಬರೆದಿದ್ದಳು. 18 ವರ್ಷದೊಳಗಿನವರ ಪರೀಕ್ಷೆಯಲ್ಲಿ ಈಕೆ ಅತಿ ಹೆಚ್ಚು 162 ಅಂಕ ಗಳಿಸಿದ್ದಾಳೆ. ಅತ್ಯಂತ ಬುದ್ದಿವಂತರೆನಿಸಿಕೊಳ್ಳಲು […]
↧