ಇಸ್ಲಾಮಾಬಾದ್: ಅಗತ್ಯ ದಾಖಲಾತಿಗಳಿಲ್ಲ ಎನ್ನುವ ಕಾರಣವೊಡ್ಡಿ ಪಾಕಿಸ್ತಾನದ ಪೊಲೀಸರು ಭಾರತೀಯನನ್ನು ಬಂಧಿಸಿದ್ದಾರೆ. ಭಾರತೀಯ ನಾಗರಿಕನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಬಂಧಿತ ಭಾರತೀಯ ಮುಂಬೈ ಮೂಲದ ಶೇಖನಬಿ ಎಂದು ಗುರುತಿಸಲಾಗಿದ್ದು, ಅಗತ್ಯ ದಾಖಲೆಗಳಿಲ್ಲದಿದ್ದರಿಂದ ಬಂಧಿಸಲಾಗಿದೆ ಎಂದು ಪಾಕ್ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಭಾರತೀಯ ನಾಗರಿಕ ಶೇಖ್‌ನಬಿ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
↧