ಅಬ್ಬಬ್ಬಾ ಈ ಹಾವುಗಳು ಎಲ್ಲೆಲ್ಲಿಯು ಇರುತ್ತದೆ. ಸಿಂಗಾಪುರದ ಮನೆಯೊಂದರಲ್ಲಿ ಜನ ನಿದ್ದೆಗೆಡುವಂತಹ ಘಟನೆಯೊಂದು ನಡೆದಿದೆ. ಮನೆಯ ಏಸಿಗೆ ಇಲಿಯೊಂದು ನೇತಾಡುತ್ತಿದ್ದದ್ದನ್ನು ಮನೆಯವರು ನೋಡಿದ್ದಾರೆ. ಏಸಿಯ ಯಾವುದೋ ಪೈಪ್‌ಗೆ ಇಲಿ ಸಿಲುಕಿದೆ ಎಂದು ಭಾವಿಸಿದ್ದಾರೆ. ಆದರೆ ಕೂಲಂಕಶವಾಗಿ ನೋಡಿದಾಗ ಹಾವೊಂದು ಏಸಿ ಮೂಲಕ ಹೊರಬಂದು ಇಲಿಯನ್ನು ನುಂಗುತ್ತಿರುವ ದೃಶ್ಯ ಕಂಡಿದೆ. ಅಷ್ಟು ದಿನ ಹಾವು ಮನೆಯೊಳಗೇ ವಾಸವಾಗಿತ್ತು ಎಂಬ ವಿಷಯ ತಿಳಿದು ಮನೆಯವರು ಕಂಗಾಲಾದರಂತೆ.
↧