ಪ್ಯಾಟ್ರಿಕ್ ಫ್ರಾನ್ಸಿಸ್ ಓ’ಹಗನ್ 1970ರಲ್ಲಿ ಪದವಿ ಮುಗಿಸಿದಾಗ ಮ್ಯಾನ್‌ಹ್ಯಾಟನ್ ಕಾಲೇಜಿನಿಂದ ಅವರಿ ಗೊಂದು ಚಿನ್ನದುಂಗುರ ಉಡುಗೊರೆ ನೀಡಲಾಗಿತ್ತು. ಕೆಲ ವರ್ಷಗಳಲ್ಲೇ ವಿವಾಹವಾದ ಪ್ಯಾಟ್ರಿಕ್, ಮಧುಚಂದ್ರಕ್ಕೆ ಕೇಪ್ ಕೋಡ್ ಕಡಲ ತೀರಕ್ಕೆ ಹೋದಾಗ ಆ ಉಂಗುರ ಬೆರಳಿನಿಂದ ಜಾರಿ, ಸಮುದ್ರದ ಪಾಲಾಗಿತ್ತು. ಈ ಘಟನೆ ನಡೆದು 47 ವರ್ಷಗಳೇ ಉರುಳಿವೆ. ಆದರೆ 2017ರ ಜುಲೈ ತಿಂಗಳು ಸಮುದ್ರ ತೀರದಲ್ಲಿ ಕಸ ಗುಡಿಸುತ್ತಿದ್ದ ಜಿಮ್ ವಿರ್ತ್‌ಗೆ ಆ ಉಂಗುರ ಸಿಕ್ಕಿದೆ! ಅದರಲ್ಲಿ ಕಾಲೇಜಿನ ಹೆಸರೊಂದಿಗೆ ಪ್ಯಾಟ್ರಿಕ್ ಹೆಸರೂ ಎಫ್ ಓ’ಹಗನ್ ಇತ್ತು. […]
↧