ಬೀಜಿಂಗ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶ ವಿವಿಧ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಕಾರವಾಗಿದ್ದು, ಈ ಪೈಕಿ “ಭಾರತ ಪ್ರೇಮಿ” ಚೀನಾ ಪತ್ರಕರ್ತೆಯಿಂದಾಗಿಯೂ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ. ಬ್ರಿಕ್ಸ್ ಸಮಾವೇಶದಲ್ಲಿ ಮಾಧ್ಯಮಗಳಿಗೆ ಹಿಂದಿ ಮಾತನಾಡುತ್ತಿದ್ದ ಚೀನಾ ಪತ್ರಕರ್ತೆ ಕಾಣಿಸಿಕೊಂಡಿದ್ದು, ಅವರನ್ನು ಭೇಟಿ ಮಾಡಿದಾಗ ಅವರ ಹಿಂದಿ ಮತ್ತು ಭಾರತ ಪ್ರೇಮ ಬಹಿರಂಗಗೊಂಡಿದೆ. ಈಕೆಯ ಹೆಸರು ತಾಂಗ್ ಯುಂಗೈ.. ಚೀನಾ ರೇಡಿಯೋ ಇಂಟರ್ ನ್ಯಾಷನ್ ಸಂಸ್ಥೆಯಲ್ಲಿನ ಹಿಂದಿ ವಿಭಾಗದಲ್ಲಿ ಈಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಿಕ್ಸ್ ಸಮಾವೇಶದ ವರದಿಗಾಗಿ […]
↧