ವಾಷಿಂಗ್ಟನ್, ಸೆ.15: ಭಾರತ ಮೂಲದ ವೈದ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅಮೆರಿಕದ ಕಾನ್ಸಾಸ್‍ನ ವಿಚಿಟ ನಗರದಲ್ಲಿ ನಡೆದಿದೆ. ಮೃತ ವೈದ್ಯರನ್ನು ತೆಲಂಗಾಣ ಮೂಲದ ಮನೋವೈದ್ಯ ಅಚ್ಯುತರೆಡ್ಡಿ (57) ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ 21 ವರ್ಷದ ಉಮರ್ ರಷೀದ್ ದತ್ ಎಂಬ ರೋಗಿಯೇ ಈ ವೈದ್ಯನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಿಳಿಸಿರುವ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ. ಬುಧವಾರ ಸಂಜೆ 7.20ರ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಲೆಫ್ಟಿನೆಂಟ್ ತಾಳ್ ವಜಿಲೆ […]
↧