ಸೋಲ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಯಮ ಉಲ್ಲಂಘಿಸಿ ಅಣ್ವಸ್ತ್ರ ಪರೀಕ್ಷೆ ಮಾಡಿದ್ದ ಉತ್ತರ ಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಬೆಳ್ಳಂಬೆಳಗ್ಗೆ ಜಪಾನ್ ಮೇಲೆ ಕ್ಷಿಪಣಿಯನ್ನು ಉಡಾಯಿಸಿ ಅಟ್ಟಹಾಸ ಮೆರೆದಿದೆ. ಇಂದು ಬೆಳಿಗ್ಗೆ ಉತ್ತರ ಕೊರಿಯಾದ ಪ್ಯೋಂಗ್ಯಾಂಗ್’ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಸುನಾನ್ ಜಿಲ್ಲೆಯಿಂದ ಹಾರಿಸಿರುವ ಖಂಡಾಂತರ ಕ್ಷಿಪಣಿ, ಸುಮಾರು 3,700 ಕಿ.ಮೀಗಳ ದೂರ ಕ್ರಮಿಸಿ ಜಪಾನ್ ದೇಶದ ಹೊಕೈಡೊ ಬಂದರನ್ನು ದಾಟಿಕೊಂಡು ಹೋಗಿ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ. ಉತ್ತರ ಕೊರಿಯಾ […]
↧