ಕಠ್ಮಂಡು: ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದ ಬಸ್ಸೊಂದು ನದಿಗೆ ಉರುಳಿ 19 ಜನ ಮೃತಪಟ್ಟಿರುವ ಘಟನೆ ನೇಪಾಳದ ಕೇಂದ್ರ ಭಾಗದಲ್ಲಿ ಶನಿವಾರ ನಡೆದಿದೆ. ಕಠ್ಮಂಡುವಿನ ಪಶ್ಚಿಮದಲ್ಲಿ 80 ಕಿಮೀ ದೂರದಲ್ಲಿರುವ ಧಡಿಂಗ ಜಿಲ್ಲೆಯಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವೇಗವಾಗಿ ಸಾಗುವಾಗ ನಿಯಂತ್ರಣ ತಪ್ಪಿದ ಬಸ್ಸು ತ್ರಿಶೂಲಿ ನದಿಗೆ ಉರುಳಿದೆ ಎನ್ನಲಾಗಿದೆ. ಕನಿಷ್ಟ 16 ಜನ ಗಾಯಗೊಂಡಿದ್ದು, ಅವರನ್ನು ನದಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಅಪಘಾತಕ್ಕೆ ಕಾರಣವೇನು ಎಂಬುದನ್ನು ಇದುವರೆಗೆ ಖಚಿತಪಡಿಸಿಲ್ಲ. ಆದರೆ ಪ್ರಯಾಣಿಕರ ಪ್ರಕಾರ […]
↧