ವಾಷಿಂಗ್‌ಟನ್: ಇತ್ತೀಚಿನ ದಿನಗಳಲ್ಲಿ ಅಮೆರಿಕದ ಪ್ರಭಾವದಿಂದ ಕೈಜಾರುತಿರುವ ಪಾಕಿಸ್ತಾನ ಚೀನಾದೆಡೆಗೆ ಹೆಚ್ಚು ವಾಲುತ್ತಿದೆ ಎಂದು ಗುಪ್ತಚರ ಇಲಾಖೆಗಳು ಅಮೆರಿಕದ ಟ್ರಂಪ್ ಸರಕಾರಕ್ಕೆ ತಿಳಿಸಿವೆ. “2019ರ ವೇಳೆಗೆ ಅಮೆರಿಕದ ನೆರಳಿನಿಂದ ಆಚೆ ಬಂದು ಪಾಕ್ ಸಂಪೂರ್ಣ ಚೀನಾ ತೆಕ್ಕೆಗೆ ಬೀಳಲಿದ್ದು ದಕ್ಷಿಣ ಏಷ್ಯಾ ಪ್ರದೇಶಲ್ಲಿ ವಾಷಿಂಗ್‌ಟನ್‌ನ ಹಿತಾಸಕ್ತಿಗೆ ಪ್ರತಿಕೂಲವಾಗಲಿದೆ” ಎಂದು ಅಮೆರಿಕದ 17 ಪ್ರಮುಖ ಗುಪ್ತಚರ ಸಂಸ್ಥೆಗಳು ಕಾಂಗ್ರೆಸ್‌ಗೆ ಎಚ್ಚರಿಸಿವೆ. ತನ್ನ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಲ್ಲದೇ ಭಯೋತ್ಪಾದಕರೊಂದಿಗೆ ತನ್ನ ಸಂಬಂಧ ಕಾಪಾಡಿಕೊಂಡು, ಭಯೋತ್ಪಾದನೆ ವಿರೋಧಿ ಕಾರ್ಯಚರಣೆಯನ್ನು ನಿಯಂತ್ರಿಸುವುದಲ್ಲದೇ ಚೀನಾಗೆ […]
↧