ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ. ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು ಹೇಳಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೋಳಿ ಮೊಟ್ಟೆ ಮಾನವನ ದೇಹದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೊಟ್ಟೆಯನ್ನ ಬಾಲಕನ ದೇಹದೊಳಗೆ ಹಾಕಲಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇಂಡೋನ್ಯೇಷ್ಯಾದ ಗೋವಾದವನಾದ ಅಕ್ಮಲ್ಗೆ ಎಕ್ಸ್ ರೇ ಕೂಡ ಮಾಡಿಸಲಾಗಿದ್ದು, ಆತ ನಿಜ ಹೇಳುತ್ತಿದ್ದಾನೆ ಎಂಬುದಕ್ಕೆ […]
↧