ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರತಿಮೆ ಮಾರಾಟವಾಗಲಿದೆ. ಅದರಲ್ಲಿ ಏನು ವಿಶೇಷವೆಂದು ಕೇಳಬೇಡಿ. ಅಲ್ಲಿಯೇ ಇರೋದು ಮಜಾ. ನ್ಯೂಜರ್ಸಿಯ ಮನಾ ಕಂಟೆಂಪರರಿ ಆರ್ಟ್ಸ್ ಸೆಂಟರ್‌ನಲ್ಲಿ ವಿಶೇಷವಾದ ಪ್ರತಿಮೆ ಇದೆ. ಆದರೆ, ಸೂಟು ಬೂಟು ಹಾಕಿರುವ ಟ್ರಂಪ್ ಪ್ರತಿಮೆ ಅದಲ್ಲ. ಸಂಪೂರ್ಣ ಬೆತ್ತಲೆಯಾಗಿರುವ ಪ್ರತಿಮೆ ಅದಾಗಿದೆ. ಮೇ 2ರಂದು ಈ ಪ್ರತಿಮೆ ಹರಾಜಾಗಲಿದೆ. ಭಾರತದ ರೂಪಾಯಿಗಳಲ್ಲಿ ಅದಕ್ಕೆ 19,54,200 ಸಿಗಬಹುದೆಂದು ನಿರೀಕ್ಷಿಸಲಾಗುತ್ತಿದೆ. ಅಮೆರಿಕದ ಹಿಂದಿನ ಚುನಾವಣೆ ವೇಳೆ ಒಟ್ಟು ತಲಾ 36 ಕೆಜಿ ಇರುವ ಐದು ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು. […]
↧