ಲಾಹೋರ್: ಭಾರತದ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರು ನೇಣುಗಂಬ ಏರಿದ 87 ವರ್ಷಗಳ ಬಳಿಕ ಅವರ ಕ್ರಾಂತಿಕಾರಿ ಹೋರಾಟಕ್ಕೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಪಾಕಿಸ್ತಾನ ಸರಕಾರ ಗುರುವಾರ ಲಾಹೋರ್ನಲ್ಲಿ ಪ್ರದರ್ಶಿಸಿದೆ. ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಿದ್ದ ಕಡತಗಳೂ ಇದರಲ್ಲಿ ಸೇರಿವೆ. ಭಾನುವಾರದವರೆಗೂ ಪ್ರದರ್ಶನ ಮುಂದುವರಿಯಲಿದ್ದು, ಸರಕಾರದ ಈ ಕ್ರಮಕ್ಕೆ ನಾಗರಿಕ ಸೇವಾ ಸಂಘಗಳು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಗತ್ ಸಿಂಗ್ ಅವರ ಕ್ರಾಂತಿಕಾರಿ ಹೋರಾಟದ ಬಿಸಿ ತಾಳಲಾರದೇ ಬ್ರಿಟಿಷ್ ಸರಕಾರ ಪೊಲೀಸ್ ಅಧಿಕಾರಿ […]
↧