ಸಂಗೀತದಿಂದ ರೋಗ ಗುಣವಾಗುತ್ತದೆ ಎಂಬ ಮಾತು ಆಗಾಗ ಕೇಳುತ್ತೇವೆ. ಆದರೆ ಬಹುತೇಕ ಸಂದರ್ಭದಲ್ಲಿ ನಂಬಿರುವುದಿಲ್ಲ. ಚೀನಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಮಿದುಳಿಗೆ ಆಮ್ಲಜನಕದ ಕೊರತೆಯಿಂದಾಗಿ ಕೋಮಾಗೆ ಜಾರಿದ್ದ 24 ವರ್ಷದ ಯುವತಿ, ಇದೀಗ ಚೀನಾದ ಗಾಯಕ ಜೈ ಚೌ ಹಾಡು ಕೇಳಿ ಕೋಮಾದಿಂದ ಹೊರಬಂದಿದ್ದಾಳೆ. ಆರಂಭ ದಲ್ಲಿ ಯುವತಿಯನ್ನು ಕೋಮಾದಿಂದ ಹೊರತರಲು ಆಸ್ಪತ್ರೆಯ ನರ್ಸ್‌ಗಳು ಏನೇನೋ ಹರಸಾಹಸಗಳನ್ನು ಮಾಡಿದ್ದರು. ಜೋಕ್‌ಗಳನ್ನು ಹೇಳುವುದು ಹಾಗೂ ಪತ್ರಿಕೆಯಲ್ಲಿ ಆಕರ್ಷಕ ಸುದ್ದಿಯನ್ನು ಓದಿ ಹೇಳುವುದನ್ನು ಮಾಡುತ್ತಿದ್ದರು. […]
↧