ಡಬ್ಲಿನ್/ಬೆಳಗಾವಿ: ಕೊನೆಗೂ ಕಠಿನ ಹಾಗೂ ಮಾನವ ವಿರೋಧಿ ಗರ್ಭಪಾತ ಕಾನೂನಿನ ವಿರುದ್ಧ ಐರ್ಲೆಂಡ್ ಧ್ವನಿಯೆತ್ತಿದೆ. ಅಮಾನುಷ ಕಾನೂನಿಗೆ ಬಲಿಯಾಗಿದ್ದ ಕನ್ನಡತಿಗೆ ನ್ಯಾಯ ಸಿಕ್ಕಿದೆ. ಐರಿಶ್ ಸಂವಿಧಾನಕ್ಕೆ ತಂದಿದ್ದ 8ನೇ ತಿದ್ದುಪಡಿಯನ್ನು ರದ್ದು ಮಾಡಲು ಐರ್ಲೆಂಡ್ ಜನತೆ “ಎಸ್’ ಎನ್ನುವ ಮೂಲಕ ಶನಿವಾರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿನ ಕಠಿನ ಗರ್ಭಪಾತ ಕಾನೂನನ್ನು ರದ್ದು ಮಾಡಬೇಕೇ, ಬೇಡವೇ ಎಂಬ ನಿಟ್ಟಿನಲ್ಲಿ ನಡೆದ ಜನಾಭಿಪ್ರಾಯದಲ್ಲಿ ಶೇ. 60.19 ಮಂದಿ ರದ್ದು ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆದ ಜನಮತ […]
↧