ನ್ಯೂಯಾರ್ಕ್: ವಾಟ್ಸಾಪ್, ಫೇಸ್ಬುಕ್ ಮೆಸೆಂಜರ್ಗಳ ಪರಿಣಾಮದಿಂದ ಮೂಲೆ ಗುಂಪಾಗಿದ್ದ ಯಾಹೂ ಮೆಸೆಂಜರ್ ತನ್ನ 20 ವರ್ಷದ ದೀರ್ಘಕಾಲಿಕ ಸೇವೆಗೆ ಜುಲೈ 17ರಂದು ತಿಲಾಂಜಲಿ ಹಾಡಲಿದೆ. 1998ರಂದು ಯಾಹೂ ಪೇಜರ್ ಎಂಬ ಹೆಸರಿನಲ್ಲಿ ಪರಿಚಯಗೊಂಡ ಯಾಹೂ ಮೆಸೆಂಜರ್ ಕೆಲವೇ ದಿನಗಳಲ್ಲಿ ಯುವ ಜನಾಂಗವನ್ನು ಸೆಳೆಯಲು ಸಫಲವಾಗಿತ್ತು. ಹೀಗಾಗಿ ಫೇಸ್ಬುಕ್ ಪರಿಚಯ ವಾಗುವವರೆಗೂ ಯಾಹೂ ಹಾಗೂ ಗೂಗಲ್ನ ಆರ್ಕುಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪಾರುಪತ್ಯ ಸಾಧಿಸಿತ್ತು. ಆದರೆ ಆರ್ಕುಟ್ ಬಳಿಕ ಇದೀಗ ಯಾಹೂ ಕೂಡಾ ತನ್ನ ಮೆಸೆಂಜರ್ ಅಪ್ಲಿಕೇಶನನ್ನು ಕೊನೆಗಾಣಿಸುತ್ತಿದ್ದು, […]
↧