ಢಾಕಾ, ಜೂ. 7: ಪ್ರಧಾನಿ ನರೇಂದ್ರ ಮೋದಿಯ ಚೊಚ್ಚಲ ಬಾಂಗ್ಲಾದೇಶ ಪ್ರವಾಸ ‘‘ಐತಿಹಾಸಿಕ’’ ಹಾಗೂ ‘‘ಉನ್ನತ ಭರವಸೆಗಳ ಭೇಟಿ’’ ಎಂಬುದಾಗಿ ಆ ದೇಶದ ಮಾಧ್ಯಮಗಳು ಇಂದು ಬಣ್ಣಿಸಿವೆ. ಮೋದಿಯ ಎರಡು ದಿನಗಳ ಭೇಟಿಯ ಬಗ್ಗೆ ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆಗಳು ಆಶಾಭಾವ ವ್ಯಕ್ತಪಡಿಸಿವೆ. ಪತ್ರಿಕೆಗಳು ಮತ್ತು ಟಿವಿ ಚಾನೆಲ್ಗಳು ಮೋದಿ ಭೇಟಿಗೆ ಹೆಚ್ಚಿನ ಮಹತ್ವ ನೀಡಿದ್ದು, ಅವರ ಚಿತ್ರಗಳೊಂದಿಗೆ ವರದಿಗಳನ್ನು ಪ್ರಕಟಿಸಿವೆ. ಅವರ ಭೇಟಿಯ ವೇಳೆ ಸಹಿ ಬೀಳಲಿರುವ ಒಪ್ಪಂದಗಳ ವಿಶ್ಲೇಷಣೆ ನಡೆಸಿವೆ.
↧