ವಾಷಿಂಗ್ಟನ್: ಕಾನ್ಸಾಸ್ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶರತ್ ಕೊಪ್ಪುನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಶಂಕಿತ ಆರೋಪಿಯನ್ನು ಅಮೆರಿಕದ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಜುಲೈ 6 ರಂದು ಮಿಸ್ಸೋರಿಯ ರೆಸ್ಟೋರೆಂಟ್ನಲ್ಲಿ ಶಂಕಿತ ಆರೋಪಿ ಶರತ್ ಕೊಪ್ಪು ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದ. ಕೊಪ್ಪು ಅವರು ಆ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಕೊಪ್ಪು ಅವರ ಮೇಲೆ ಗುಂಡು ಹಾರಿಸಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಶಂಕಿತ ಹಂತಕನ ವಿಡಿಯೋವನ್ನು ಪೊಲೀಸರು ರಿಲೀಸ್ ಮಾಡಿ, ಕಂದು ಮತ್ತು ಬಿಳಿ ಬಣ್ಣದ […]
↧