ನ್ಯೂಯಾರ್ಕ್: ರಷ್ಯಾ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಭಾರತದ ವಿರುದ್ಧ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವುದಕ್ಕೆ ಅಮೆರಿಕ ಕಾಂಗ್ರೆಸ್ ನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. 87-10 ಅಂತರದಿಂದ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆಯ ಮಸೂದೆ ಅಂಗೀಕಾರಗೊಂಡಿದ್ದು, ಮುಂದಿನ ಹಂತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗಾಗಿ ಶ್ವೇತ ಭವನವನ್ನು ತಲುಪಲಿದೆ. ಕಾಯ್ದೆಯಲ್ಲಿ ಭಾರತದ ವಿರುದ್ಧವಿದ್ದ ನಿರ್ಬಂಧವನ್ನು ತೆಗೆದುಹಾಕುವ ಅಂಶಗಳಿದ್ದು, ಸಿಎಎಟಿಎಸ್ಎ ಮನ್ನಾ (CAATSA waiver) ಅಂಶದಿಂದಾಗಿ ಭಾರತ ರಷ್ಯಾದ ಎಸ್-400 ವ್ಯವಸ್ಥೆಯನ್ನು ಸುಲಭವಾಗಿ ಆಮದುಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ […]
↧