ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಅಪರಿಚಿತ ಬಂದೂಕುಧಾರಿಗಳು ಓರ್ವ ಭಾರತೀಯ ಸಹಿತ ಮೂವರನ್ನು ಅಪಹರಿಸಿ ಕೊಂದಿರುವುದನ್ನು ಭಾರತ ಬಲವಾಗಿ ಖಂಡಿಸಿದೆ. ಕಾಬೂಲಿನಲ್ಲಿ ಅಪಹರಣಕ್ಕೆ ಗುರಿಯಾಗಿ ಹತನಾಗಿರುವ ಭಾರತೀಯ ವ್ಯಕ್ತಿಯ ಕಳೇಬರವನ್ನು ಭಾರತಕ್ಕೆ ಮರಳಿಸುವ ನಿಟ್ಟಿನಲ್ಲಿ ಅಫ್ಘಾನ್ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕೇಂದ್ರ ಸರಕಾರ, ಕಾಬೂಲ್ ನಲ್ಲಿರುವ ಭಾರತೀಯ ದೂತಾವಾಸಕ್ಕೆ ನಿರ್ದೇಶ ನೀಡಿದೆ. ಅಪಹರಣಕ್ಕೆ ಗುರಿಯಾಗಿ ಕೊಲ್ಲಲ್ಪಟ್ಟಿರುವ ಮೂವರಲ್ಲಿ ಇನ್ನಿಬ್ಬರು ಮಲೇಶ್ಯ ಮತ್ತು ಮೆಸಡೋನಿಯ ದವರು. ಇವರು ಅಫ್ಘಾನ್ ರಾಜಧಾನಿಯಲ್ಲಿ ಲಾಜಿಸ್ಟಿಕ್ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರು.
↧