ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳ ಜಾದೂಗಾರಿಕೆ ಬಳಸಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಿದ್ದ ರಷ್ಯಾ ಹ್ಯಾಕರ್ ಪಡೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ತಡೆಗೆ ಸ್ಕೆಚ್ ಹಾಕಿದೆ ಎಂಬ ಮಾಹಿತಿ ಬಯಲಾಗಿದೆ. ರಷ್ಯಾವು ಅಮೆರಿಕ ಚುನಾವಣೆ ಮೇಲೆ ಬೀರಿದ ಪ್ರಭಾವವನ್ನೇ ಮುಂದೆ ಭಾರತದತ್ತಲೂ ತಿರುಗಿಸುವ ಸನ್ನಾಹ ನಡೆಸಿದೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಇಂಟರ್‌ನೆಟ್ ಅಧ್ಯಯನ ಸಂಸ್ಥೆಯ ಪ್ರೊಫೆಸರ್ ಫಿಲಿಪ್ ಎನ್.ಹೊವರ್ಡ್ ಎಚ್ಚರಿಸಿರುವುದು ಗಮನಾರ್ಹವಾಗಿದೆ. ನರೇಂದ್ರ ಮೋದಿ ಅವರು ಜಾಗತಿಕ ನಾಯಕನಾಗಿ […]
↧