ಢಾಕಾ, ಜೂ.8: ಪ್ರಧಾನಿ ನರೇಂದ್ರ ಮೋದಿಯ ಚೊಚ್ಚಲ ಬಾಂಗ್ಲಾದೇಶ ಪ್ರವಾಸದ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಟಿವಿ ವಾಹಿನಿಗಳು ಈ ಸಂದರ್ಭದಲ್ಲಿ ಉಂಟಾಗಿರುವ ತುಸು ಬೇಸರವನ್ನುಂಟು ಮಾಡುವ ವಿಷಯವನ್ನೂ ಪ್ರಸ್ತಾಪಿಸಲು ಮರೆತಿಲ್ಲವೆನ್ನಬಹುದು. ಬಾಂಗ್ಲಾದೇಶದ ವಿಶೇಷ ಮಾಂಸಾಹಾರಿ ಖಾದ್ಯಗಳ ರುಚಿಯನ್ನು ಆಸ್ವಾದಿಸಲು ಶಾಕಾಹಾರಿ ಮೋದಿಯವರಿಗೆ ಸಾಧ್ಯವಾಗದೆ ಹೋಯಿತು. ಮೋದಿಯವರ ಶಾಕಾಹಾರ ಸೇವನೆಯಿಂದಾಗಿ ಶನಿವಾರ ರಾತ್ರಿ ಢಾಕಾದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಔತಣ ಕೂಟದಲ್ಲಿ ರಾಷ್ಟ್ರದ ಯಾವುದೇ ವಿಶೇಷ ಖಾದ್ಯಗಳ ಸವಿಯುಣಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ. ಗುಜರಾತಿ ಖಮನ್ನಿಂದ […]
↧