ಚೆನ್ನೈ: ತಮಿಳುನಾಡಿನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿ) ವಿರುದ್ಧ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು (ಎಸ್ಪಿ) ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಸರಕಾರ, ತನಿಖೆಗಾಗಿ ಆಂತರಿಕ ಸಮಿತಿಯೊಂದನ್ನು ರಚಿಸಿದೆ. ಹಿರಿಯ ಅಧಿಕಾರಿ ಲೈಂಗಿಕವಾಗಿ ತಮಗೆ ಹೇಗೆ ಕಿರುಕುಳ ನೀಡಿದರೆಂಬ ಬಗ್ಗೆ ಎಸ್ಪಿ ಲಿಖಿತ ದೂರಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಅಧಿಕಾರಿಯು ತಮ್ಮನ್ನು ಅಪ್ಪಿಕೊಳ್ಳಲು ಯತ್ನಿಸಿದರು. ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುತ್ತಿದ್ದರು, ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಿದ್ದರು. ಇದಕ್ಕೆ ಪ್ರತಿರೋಧ ತೋರಿದ್ದಕ್ಕಾಗಿ ನಂತರ ತಮಗೆ ಕಿರುಕುಳ […]
↧