ಲಂಡನ್: ವಾಹನಗಳ ಹಾರ್ನ್ ಮತ್ತು ಇನ್ನಿತರ ಶಬ್ದಕ್ಕೂ ಮನುಷ್ಯನ ಸ್ಥೂಲಕಾಯಕಕ್ಕೂ ಸಂಬಂಧವಿದೆಯೇ? ಹೌದು ಎನ್ನುತ್ತದೆ ಸ್ಪೇನ್ ವಿಜ್ಞಾನಿಗಳ ಅಧ್ಯಯನ. ದೀರ್ಘವಾಗಿ ಮೊಳಗುವ ಹಾರ್ನ್ಗೆ ಮತ್ತು ರಸ್ತೆ ಸಂಚಾರದಲ್ಲಿನ ಇನ್ನಿತರ ಶಬ್ದಮಾಲಿನ್ಯಕ್ಕೆ ತೆರೆದುಕೊಂಡರೆ ಬೊಜ್ಜು ಅಧಿಕವಾಗುತ್ತದೆ. 10 ಡಿಸಿಬಲ್ (ಡಿಬಿ) ಶಬ್ದ ಹೆಚ್ಚಳವಾದರೆ, ದೇಹ ಶೇ.17ರಷ್ಟು ದಢೂತಿಯಾಗುತ್ತದೆ ಎಂದು ಸ್ಪೇನ್ನ ಬಾರ್ಸಿಲೋನಾ ಗ್ಲೋಬಲ್ ಹೆಲ್ತ್ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ. ಅತಿಯಾದ ಶಬ್ದದಿಂದ ಒತ್ತಡ ಹೆಚ್ಚುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಬಳಲಿದರೆ ಹಾಮೋನ್ಗಳಲ್ಲಿ ಬದಲಾವಣೆ ಉಂಟಾಗಿ ರಕ್ತದೊತ್ತಡ ಏರುತ್ತದೆ. […]
↧