ಲಂಡನ್, ಮುಂಬೈ: ಸಾವಿರಾರು ಕೋಟಿ ವಂಚಿಸಿ ದೇಶದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ವಿಜಯ್ ಮಲ್ಯ ಲಂಡನ್ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯನ್ನು ಉಳಿಸಿಕೊಳ್ಳುವುದರಲ್ಲೂ ವಿಫಲರಾಗಿದ್ದಾರೆ. ಮದ್ಯದ ದೊರೆ ವಿಜಯ್ ಮಲ್ಯ ಅವರ ಲಂಡನ್ ನಿವಾಸವನ್ನು ಜಪ್ತಿ ಮಾಡಲು ಯುನೈಟೆಡ್ ಕಿಂಗ್ಡಮ್ನ ಹೈಕೋರ್ಟ್ ಆದೇಶಿಸಿದೆ. ಲಂಡನ್ನಲ್ಲಿರುವ ತಮ್ಮ ಆಸ್ತಿಯನ್ನು ಅಡವಿಟ್ಟು ವಿಜಯ್ ಮಲ್ಯ ಸ್ವಿಸ್ ಬ್ಯಾಂಕ್ನಿಂದ 185 ಕೋಟಿ ಸಾಲ ಪಡೆದಿದ್ದರು. ಆ ಹಣವನ್ನು ಬ್ಯಾಂಕ್ಗೆ ಮರುಪಾವತಿ ಮಾಡದ ಕಾರಣ ಬಂಗಲೆಯನ್ನು ವಶಕ್ಕೆ ಪಡೆಯಲು ಬ್ಯಾಂಕ್ಗೆ ಕೋರ್ಟ್ ಅನುಮತಿ ನೀಡಿದೆ. ವಿಚಾರಣೆಯನ್ನು […]
↧