ಕಚ್ಚಾತೈಲದ ಉತ್ಪಾದನೆಯನ್ನು ದಿನಕ್ಕೆ 12 ಲಕ್ಷ ಬ್ಯಾರೆಲ್ಗಳಷ್ಟು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಮತ್ತೊಂದೆಡೆ, ಅಮೆರಿಕ ಹೆಚ್ಚಿನ ಪ್ರಮಾಣದಲ್ಲಿ ತೈಲ ರಫ್ತಿಗೆ ಒಲವು ತೋರಿದ್ದು, ಈ ಎಲ್ಲ ಬೆಳವಣಿಗೆಗಳು ಮತ್ತು ಒಟ್ಟಾರೆಯಾಗಿ ಭಾರತದ ಮೇಲಾಗುವ ಪರಿಣಾಮಗಳ ಕುರಿತ ಅವಲೋಕನ ಇಲ್ಲಿದೆ. ಭಾರತ ಮತ್ತು ಇರಾನ್ ನಡುವಿನ ಕಚ್ಚಾತೈಲ ವ್ಯವಹಾರವನ್ನು ರೂಪಾಯಿ ಮೂಲಕವೇ ನಡೆಸುವ ಒಪ್ಪಂದಕ್ಕೆ ಉಭಯ ದೇಶಗಳು ಇತ್ತೀಚೆಗಷ್ಟೇ ಸಹಿಹಾಕಿದ್ದು ಗೊತ್ತಿರುವಂಥದ್ದೇ. ಇರಾನ್ನಿಂದ ಭಾರತ ಪ್ರತಿದಿನ 3 ಲಕ್ಷ ಬ್ಯಾರೆಲ್ನಷ್ಟು ಕಚ್ಚಾತೈಲ […]
↧