ಪಾಕಿಸ್ತಾನದ ಬಾಲ್ಕೋಟ್ನಲ್ಲಿ ಫೆಬ್ರವರಿ 26ರಂದು ಭಾರತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರವನ್ನು ಗುರಿಯನ್ನಾಗಿಸಿಕೊಂಡು ವಾಯು ದಾಳಿ ನಡೆಸಿದ ಸ್ಥಳದಲ್ಲಿ 35 ಮೃತದೇಹಗಳನ್ನು ನೋಡಿದ್ದಾಗಿ ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದಾಳಿ ನಡೆದ ಒಂದು ಗಂಟೆಯ ನಂತರ ಆ ಮೃತದೇಹಗಳನ್ನು ಆ್ಯಂಬುಲೆನ್ಸ್ನಲ್ಲಿ ಸಾಗಿಸಲಾಯಿತು ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಸುಮಾರು 12 ಮಂದಿ ತಾತ್ಕಾಲಿಕವಾದ ಮರದ ಒಂದೇ ಕಟ್ಟಡದಲ್ಲಿ ಇದ್ದರು. ಮತ್ತು ಇನ್ನು ಹಲವು ಮಂದಿ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದವರು ದಾಳಿ ವೇಳೆ ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು […]
↧