ಲಾಹೋರ್: ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಫಯಾಜುಲ್ ಹಸನ್ ಚೋಹನ್ ಅವರನ್ನು ಸಚಿವ ಸ್ಥಾನದಿಂದ ಪಾಕಿಸ್ತಾನದ ಪಂಜಾಬ್ ಸರಕಾರ ವಜಾಗೊಳಿಸಿದೆ. ಚೋಹನ್ ವಿರುದ್ಧ ಪಂಜಾಬ್ ಸರಕಾರದ ಹಿರಿಯ ಸಚಿವರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಈ ಕ್ರಮಕೈಗೊಂಡಿದ್ದಾರೆ. ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಫೆ.24ರಂದು ಲಾಹೋರ್‌ನಲ್ಲಿ ಪಂಜಾಬ್ ಸರಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವರಾಗಿದ್ದ ಪಾಕಿಸ್ತಾನ್ […]
↧