ಕ್ರೈಸ್ಟ್ ಚರ್ಚ್: ಇಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರ ಬಂದೂಕುಧಾರಿಗಳು ಪ್ರಾರ್ಥನೆಯ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 49 ಮಂದಿ ಸಾವನ್ನಪ್ಪಿದ್ದು, ಇದನ್ನು ಭಯೋತ್ಪಾದಕ ಕೃತ್ಯ ಎಂದು ಕಿವೀಸ್ ಪ್ರಧಾನಿ ಬಣ್ಣಿಸಿದ್ದಾರೆ. ಇದು ಕಿವೀಸ್ ಇತಿಹಾಸದಲ್ಲೇ ನಡೆದ ಅತ್ಯಂತ ಭಯಾನಕ ಸಾಮೂಹಿಕ ಹತ್ಯಾ ಘಟನೆ ಎಂದು ಹೇಳಲಾಗುತ್ತಿದ್ದು, ಘಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನೂ ರದ್ದುಪಡಿಸಲಾಗಿದೆ. ಮಸೀದಿ ಶೂಟಿಂಗ್ ಪ್ರಕರಣಗಳಲ್ಲಿ, ಕನಿಷ್ಠ 49 ಮಂದಿ ಸಾವನ್ನಪ್ಪಿದ್ದಾರೆ, 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ […]
↧