ಕಾಠ್ಮಂಡು: ಕೂಕರ್ ತಿಹಾರ್, ಇದು ನಾಯಿಗಳ ಹಬ್ಬ. ಹೌದು ನೇಪಾಳದಲ್ಲಿ ನಾಯಿಯ ನಿಯತ್ತು, ಪ್ರೀತಿಯನ್ನು ಕೊಂಡಾಡಿ ವರುಷಕ್ಕೊಮ್ಮೆ ಅದನ್ನು ಪೂಜಿಸುವ ಹಬ್ಬ ನಡೆಯುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಎರಡನೇ ದಿನ ನಾಯಿಯನ್ನು ಪೂಜಿಸಲಾಗುತ್ತದೆ. ನೇಪಾಳದಲ್ಲಿ ನೆವಾರ್ ವಿಭಾಗಕ್ಕೆ ಸೇರಿದ ಜನರು ಈ ರೀತಿಯ ವಿಶೇಷ ಹಬ್ಬವನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸುತ್ತಾರೆ. ಕೃಷ್ಣ ಕಾರ್ತಿಕದ ತ್ರಯೋದಶಿಯಂದು ಆರಂಭವಾಗುವ ಈ ಹಬ್ಬ ಕಾರ್ತಿಕ ತಿಂಗಳಿನ ಶುಕ್ಲ ದ್ವಿತೀಯವರೆಗೆ ನಡೆಯುತ್ತದೆ. ಕೂಕರ್ ತಿಹಾರ್ ಅಥವಾ ಕೂಕರ್ ಪೂಜೆಯ […]
↧