ಇಸ್ಲಮಾಬಾದ್: ತಪ್ಪು ಮಾಡಿದರೇ ಮನುಷ್ಯರಿಗೆ ಶಿಕ್ಷೆ ಕೊಡುತ್ತಾರೆ, ಬಂಧನದಲ್ಲಿ ಇಡುತ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಒಂದು ಆಲದ ಮರಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸುಮಾರು 121 ವರ್ಷದಿಂದ ಆ ಮರ ಶಿಕ್ಷೆ ಅನುಭವಿಸುತ್ತಿದೆ. ಹೌದು, ವಿಚಿತ್ರ ಅನಿಸಿದರೂ ಇದು ಸತ್ಯ. ಪಾಕಿಸ್ತಾನದ ಖೆಬರ್ ಏಜೆನ್ಸಿಯಲ್ಲಿರುವ ಆಲದ ಮರಕ್ಕೆ ಶತಮಾನದ ಹಿಂದೆ ಇದ್ದ ಒಬ್ಬ ಬ್ರಿಟಿಷ್ ಅಧಿಕಾರಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಬ್ರಿಟಿಷ್ ಸೇನಾಧಿಕಾರಿ ಮಾಡಿದ ಎಡವಟ್ಟಿನಿಂದ ಇಂದಿಗೂ ಆ ಆಲದ ಮರಕ್ಕೆ ಸರಪಳಿಗಳನ್ನು ಕಟ್ಟಿ ಬಂಧಿಸಿಡಲಾಗಿದೆ. […]
↧