ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿನ ಅಪಾಯಗಳ ಕುರಿತು ಜಾಗ್ರತೆ ಹೊಂದಿರಬೇಕು. ಅದರಲ್ಲೂ ದಂಡೆಗೆ ರಭಸವಾಗಿ ಅಲೆಗಳು ಅಪ್ಪಳಿಸುವ ಕಡಲ ತೀರದಲ್ಲಿ, ರಭಸವಾಗಿ ಧುಮುಕುವ ಜಲಪಾತದಲ್ಲಿ, ಬೃಹತ್ ಆಳದ ಕಂದಕದ ಸಮೀಪ ಹೀಗೆ ಇಂತಹ ಸ್ಥಳಗಳಲ್ಲಿ ಸಾಕಷ್ಟು ಜಾಗ್ರತೆಯಿಂದಿರಬೇಕು. ಮೈಮರೆತರೆ ಪ್ರಾಣಕ್ಕೆ ಅಪಾಯ. ಇಂಡೋನೇಷ್ಯಾದ ಬಾಲಿಯ ಪ್ರಸಿದ್ಧ ಪ್ರವಾಸಿ ತಾಣ ಡೆವಿಲ್ಸ್ ಟೀರ್‌ನಲ್ಲಿ ಪ್ರವಾಸಿಗರೊಬ್ಬರು ಮೈಮರೆತು ಫೋಟೋಗೆ ಪೋಸ್ ನೀಡುತ್ತಿದ್ದಾಗ ಧೈತ್ಯ ಅಲೆಯೊಂದು ಆಕೆಯನ್ನು ಕೊಚ್ಚಿಕೊಂಡು ಹೋಗಿದೆ. ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. […]
↧