ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷಿ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ ಮಾಡಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಅಮೆರಿಕ ಮೂಲದ ಬಾಹ್ಯಾಕಾಶ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದು, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್-ಸ್ಮಿತ್ ಸನ್ ಸೆಂಟರ್ ಫಾರ್ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆಯ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜೋನಾಥನ್ ಮೆಕ್ ಡಾವೆಲ್ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಭಾರತದ ಎ-ಸ್ಯಾಟ್ ಕ್ಷಿಪಣಿಯನ್ನು ಅಮೆರಿಕ ವಾಯುಸೇನೆ ಪತ್ತೆ ಮಾಡಿತ್ತು. […]
↧