ಕೊಲಂಬೊ: ಶ್ರೀಲಂಕಾದ ಮೂರು ಚರ್ಚ್ ಹಾಗೂ ಮೂರು ಹೋಟೆಲ್ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು, ಕನಿಷ್ಠ 137ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈಸ್ಟರ್ ದಿನವಾದ ಇಂದು (ಭಾನುವಾರ) ಚರ್ಚ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗಾಗಿ ಸಾವು ನೋವಿನ ಸಂಖ್ಯೆ ಅಧಿಕವಾಗಿದೆ. ಕೊಲಂಬೊದ ಸೆಂಟ್ ಆಂಥೋನಿ ಶ್ರೈನ್ ಚರ್ಚ್ನಲ್ಲಿ ಮೊದಲ ಬಾಂಬ್ ಸ್ಪೋಟಗೊಂಡಿದೆ. ಸ್ಪೋಟದ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. […]
↧