ಇಸ್ಲಾಮಾಬಾದ್: ಜಪಾನ್ ಹಾಗೂ ಜರ್ಮನಿ ದೇಶಗಳು ಗಡಿ ಹಂಚಿಕೊಂಡಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ. ಇಮ್ರಾನ್ ಖಾನ್ ಅವರು ಸೋಮವಾರ ಇರಾನ್‍ಗೆ ಭೇಟಿ ನೀಡಿದ್ದರು. ಈ ವೇಳೆ ಇರಾನ್ ಅಧ್ಯಕ್ಷ ರೌಹಾನಿ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿ ವೇಳೆ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಎರಡೂ ದೇಶಗಳು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿವೆ […]
↧