ಕೊಲಂಬೋ: ಭಾರತದ ಗುಪ್ತಚರ ವರದಿ ಇದ್ದಾಗಲೂ ಶ್ರೀಲಂಕಾ ಸರ್ಕಾರ ಅದನ್ನು ನಿರ್ಲಕ್ಷಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸರ್ಕಾರದಲ್ಲಿನ ಕೆಲ ಉನ್ನತ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸ್ಫೋಟ ನಡೆಯುವ ಸಾಧ್ಯತೆ ಕುರಿತ ಭಾರತದ ವರದಿಯನ್ನು ಮುಚ್ಚಿಟ್ಟಿದ್ದರು ಎಂದು ಲಂಕಾ ಸರ್ಕಾರ ಬಹಿರಂಗಪಡಿಸಿದೆ. ಭಾರತೀಯ ದೂತಾವಾಸ ಕಚೇರಿ, ಚರ್ಚ್, ಹೋಟೆಲ್ ಹಾಗೂ ರಾಜಕಾರಣಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು 10 ದಿನಗಳ ಹಿಂದೆಯೇ ಭಾರತದ ಗುಪ್ತಚರ ಸಂಸ್ಥೆಗಳು ಲಂಕಾದ ಗುಪ್ತಚರ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದವು. […]
↧