ಮಸೂದ್ ಅಜರ್ ನ್ನು ಜಾಗತಿಕ ಉಗ್ರನ ಪಟ್ಟಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿಸಿದ್ದು, ಪಾಕಿಸ್ತಾನ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಮಸೂದ್ ಅಜರ್ ವಿರುದ್ಧ ವಿಶ್ವಸಂಸ್ಥೆ ಹೇರಿರುವ ನಿರ್ಬಂಧವನ್ನು ತಕ್ಷಣವೇ ಜಾರಿಗೊಳಿಸುವುದಾಗಿ ಹೇಳಿದೆ. ಮಸೂದ್ ಅಜರ್ ನ್ನು ಜಾಗತಿಕ ಮಟ್ಟದ ಉಗ್ರ ಎಂದು ಘೋಷಿಸಿ ನಿರ್ಬಂಧ ವಿಧಿಸುವುದಕ್ಕೆ ತಾನು ಒಪ್ಪಿಗೆ ಸೂಚಿಸಿದ್ದಾಗಿಯೂ ಪಾಕಿಸ್ತಾನ ಇದೇ ವೇಳೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿ […]
↧