ಫ್ಲೋರಿಡಾ: ತಮ್ಮ ಬಾಲ್ಯದ ಗೆಳೆಯನನ್ನು ಕೋರ್ಟ್ ಕಟಕಟೆಯಲ್ಲಿ ಅಪರಾಧಿಯಾಗಿ ಕಂಡ ಜಡ್ಜ್‌ವೊಬ್ಬರು ಭಾವುಕರಾದರು. ಆ ಗೆಳೆಯನೂ ತನ್ನ ಪರಿಸ್ಥಿತಿಗೆ ಪರಿತಪಿಸಿ ಬಿಕ್ಕಿ ಬಿಕ್ಕ ಅತ್ತ. ಇದು ಫ್ಲೋರಿಡಾದಲ್ಲಿ ನಡೆದಿದ್ದು. ಈ ಅಪರೂಪದ ಸನ್ನಿವೇಶದವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಲೋರಿಡಾದ ನ್ಯಾಯಾಧೀಶೆ ಮಿಂಡ್ಲಿ ಗ್ಲೇಸರ್ ಅವರು ಕಳ್ಳತನ ಪ್ರಕರಣವೊಂದರ ವಿಚಾರಣೆ ನಡೆಯುವಾಗ ಆರೋಪಿ ಆರ್ಥರ್ ಬೂತ್ ಎಂಬಾತನನ್ನು ಗುರುತು ಹಿಡಿದು ಹೇಗಿದ್ದೀ? ನೀನ್ಯಾಕೆ ಹೀಗಾದೆ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಚಾರಣೆ ಪ್ರಾರಂಭವಾಗುತ್ತಲೇ ಆರೋಪಿಯ ಮುಖ ನೋಡಿದ ಗ್ಲೇಸರ್ ಅವರು, […]
↧