ಕಠ್ಮಂಡು, ಜು.5-ಕಳೆದ ಏಪ್ರಿಲ್-ಮೇನಲ್ಲಿ ಸಂಭವಿಸಿದ ಭೂಕಂಪದಿಂದ ಜರ್ಝರಿತಗೊಂಡಿರುವ ನೇಪಾಳದಲ್ಲಿ ಇಂದು ಮತ್ತೆ ಎರಡು ಬಾರಿ ಲಘು ಕಂಪನಗಳು ಸಂಭವಿಸಿದ್ದು, ಸಾವಿರಾರು ಜನ ಭಯಭೀತರಾಗಿ ಮನೆಗಳಿಂದ ಹೊರಗೋಡಿ ಬಂದ ಘಟನೆ ನಡೆಯಿತು. ಬೆಳಗಿನ ಜಾವ 1.27ರ ಸಮಯ ಸಿಂಧೆ ಪಾಲ್ ಚೌಕ್ನಲ್ಲಿ ಅಡಿಕೇಂದ್ರ ಹೊಂದಿದ್ದ 4-6 ತೀವ್ರತೆಯ ಕಂಪನ ಉಂಟಾಗಿದೆ. ನಂತರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಧಾಡಿಂಗ್ ಜಿಲ್ಲೆಯಲ್ಲಿ ಅಡಿಕೇಂದ್ರ ಹೊಂದಿದ್ದ 4.2ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ. ಇದರಿಂದ ಭೀತಿಗೊಳಗಾದ ಸಾರ್ವಜನಿಕರು ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಮನೆಗಳಿಂದ ಹೊರಗೋಡಿಬಂದಿದ್ದಾರೆ. […]
↧