ಕೊಲಂಬೊ: ಶ್ರೀಲಂಕಾದ ಪೆರೆಹಾರ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ದ ವೃದ್ಧ ಆನೆಯೊಂದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನಾರೋಗ್ಯದಿಂದ ಅಸ್ಥಿಪಂಜರ ಕಾಣುವಷ್ಟು ಬಡಕಲಾಗಿದ್ದ ಆನೆಯ ಮೇಲೆ ವರ್ಣರಂಜಿತ ಬಟ್ಟೆಗಳನ್ನು ಹೊದಿಸಿ ಬೌದ್ಧ ಹಬ್ಬದ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಶುಕ್ರವಾರ ತನಿಖೆಗೆ ಆದೇಶಿಸಿದೆ. ತಿಕಿರಿ ಎಂಬ ಹೆಣ್ಣು ಆನೆಗೆ 70 ವರ್ಷ ವಯಸ್ಸಾಗಿದೆ. ಪ್ರತಿ ವರ್ಷ ಶ್ರೀಲಂಕಾದಲ್ಲಿ ನಡೆಯುವ ಪೆರೆಹಾರ ಉತ್ಸವದಲ್ಲಿ ಪಾಲ್ಗೊಳ್ಳುವ 60 ಆನೆಗಳಲ್ಲಿ ಈ ಆನೆಯು ಒಂದು. […]
↧