ಪಾರೋ(ಭೂತಾನ್: ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಭೂತಾನ್ ಗೆ ಆಗಮಿಸಿದ್ದಾರೆ. ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೋದಿಯವರನ್ನು ಅವರ ಭೂತಾನ್ ಸಹವರ್ತಿ ಡಾ. ಲೋಟೆ ಷೇರಿಂಗ್ ಮತ್ತಿತರರು ಆದರದಿಂದ ಸ್ವಾಗತಿಸಿದ್ದಾರೆ. ಭೂತಾನ್ ರಾಜಧಾನಿ ತಿಂಪುವಿನ ಪಶ್ಚಿಮಕ್ಕಿರುವ ಕಣಿವೆ ನಗರವಾದ ಪಾರೋ ವಿಮಾನದಲ್ಲಿಳಿಯುತ್ತಿದ್ದಂತೆ ಪ್ರಧಾನಿಗಳಿಗೆ ಮಗುವೊಂದು ಪುಷ್ಪಗುಚ್ಚ ನೀಡಿದೆ. ಅಲ್ಲದೆ ಮೋದಿಗೆ ವಿಮಾನ ನಿಲ್ದಾಣದಲ್ಲಿ ಗೌರವ ರಕ್ಷೆ ನೀಡಲಾಗಿತ್ತು. ಮೋದಿಯವರು ಎರಡನೇ ಬಾರಿ ಭಾರತದ ಪ್ರಧಾನಿಯಾದ ನಂತರ ಇದು ಮೊದಲ […]
↧