ರಾವಲ್‌ಪಿಂಡಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370ನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮಕ್ಕೆ ಕಿಡಿಕಾರಿರುವ ಪಾಕಿಸ್ತಾನ ಪದೇ ಪದೆ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಇದೀಗ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ ಮತ್ತು ನವೆಂಬರ್ ವೇಳೆಗೆ ಪೂರ್ಣ ಪ್ರಮಾಣದ ಯುದ್ಧವಾಗಲಿದೆ ಎಂದು ಅನ್ನಿಸುತ್ತಿದೆ ಹೇಳಿದ್ದಾರೆ. ಕಾಶ್ಮೀರಿಗಳಿಗೆ ಸಂಬಂಧಿಸಿದಂತೆ ರಾವಲ್‌ಪಿಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, “ಕಾಶ್ಮೀರದ ವಿಮೋಚನೆಗಾಗಿ ಕೊನೆಯ ಯುದ್ಧದ ಸಮಯ ಬಂದಿದೆ […]
↧