ಇಸ್ಲಾಮಾಬಾದ್: ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಪಾಕಿಸ್ತಾನದಿಂದ ಬರಲಿವೆ ನಾಲ್ಕು ಹೆಬ್ಬಾವುಗಳು ಮತ್ತು ಒಂದು ಮೊಸಳೆಯ ಉಡುಗೊರೆ… ಅವು ನಿನ್ನನ್ನು ಕಬಳಿಸುತ್ತವೆ ನೋಡುತ್ತಿರು ಎಂದು ಪಾಕಿಸ್ತಾನದ ಪಾಪ್ ಗಾಯಕಿಯೊಬ್ಬರು ಬೆದರಿಕೆ ಹಾಕಿದ್ದಾಳೆ. ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಈ ಎಚ್ಚರಿಕೆಯ ಸಂದೇಶ ನೀಡಿರುವ ಆಕೆ ಸದ್ಯ ಪಾಕಿಸ್ತಾನದ ಜೈಲು ಸೇರಿದ್ದಾಳೆ! ರಬಿ ಪೀರ್ಜಾದಾ ಬಂಧನಕ್ಕೆ ಒಳಗಾಗಿರುವ ಪಾಕಿಸ್ತಾನದ ಪಾಪ್ ಗಾಯಕಿ. ಜೀವಕ್ಕೆ ಅಪಾಯಕಾರಿಯಾದ ಜಂತುಗಳನ್ನು ಅಕ್ರಮವಾಗಿ ಸಾಕುಪ್ರಾಣಿಗಳನ್ನಾಗಿ ಇರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ […]
↧