ಇಸ್ಲಾಮಾಬಾದ್/ಭಾರತ: ಪ್ರಬಲ ಭೂಕಂಪನಕ್ಕೆ ಪಾಕಿಸ್ತಾನದಲ್ಲಿ ಭೂಮಿ ಬಾಯ್ತೆರೆದಿದ್ದು ಉತ್ತರ ಭಾರತದಲ್ಲೂ ಕಂಪನದ ಅನುಭವವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ಸಂಜೆ 4.30ರ ಸುಮಾರಿಗೆ ಪಾಕಿಸ್ತಾನ-ಭಾರತ ಗಡಿ ಪ್ರದೇಶದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಾಕಿಸ್ತಾನದ ಲಾಹೋರ್ ನ ವಾಯುವ್ಯ ಭಾಗದಲ್ಲಿ ಪ್ರಬಲ ಭೂಕಂಪನವಾಗಿದ್ದು ಪ್ರಮುಖ ರಸ್ತೆಗಳು ಬಾಯ್ತೆರೆದಿವೆ. ಇನ್ನು ರಸ್ತೆಯಲ್ಲಿ ಓಡಾಡುತ್ತಿದ್ದ ಕಾರುಗಳು ನಜ್ಜುಗುಜ್ಜಾಗಿವೆ.
↧